ಕಲ್ಬುರ್ಗಿ ಜ. 18: ಕಲಬುರಗಿಯಲ್ಲಿ ಕಪ್ಪೆಗಳ ಮದುವೆ ಮಾಡಲಾಗಿದೆ. ಇದರಿಂದ ಮಳೆ ಬರುತ್ತಾ ಎನ್ನುವುದೇ ಕುತುಹಲ. ಆದ್ರೆ ಜನ ಕಪ್ಪೆಗಳ ಮದುವೆ ಮಾಡಿದ್ರೆ ಮಳೆ ಬರುತ್ತೆ ಎಂದು ನಂಬಿದ್ದಾರೆ. ಹಾಗಾಗಿಯೇ ಕಪ್ಪೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಕಪ್ಪೆಗಳ ಮದುವೆ ವಿಶೇಷ ಮಾಹಿತಿ ಇಲ್ಲಿದೆ ಓದಿ.
ಕಲ್ಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟ ಕಾರಣ ಜನ ಹಾಗೂ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಮಳೆಗಾಗಿ ಜನ ನಾನಾ ಕಸರತ್ತು, ವಿಶೇಷ ಪೂಜೆ ಪುನಸ್ಕಾರಗಳು, ವಿವಿಧ ಆಚರಣೆಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೊಂದು ಜೀವಂತ ಸಾಕ್ಷಿ ಈ ಕಪ್ಪೆಗಳ ಮದುವೆ.
ಕಲಬುರಗಿಯಲ್ಲಿ ಕಪ್ಪೆಗಳ ಮದುವೆ : ಇದರಿಂದ ಮಳೆ ಬರುತ್ತಾ ?
ಹೌದು !! ಕಪ್ಪೆಗಳನ್ನ ಹಿಡಿದು ತಂದು ಮದುವೆ ಮಾಡಿದರೆ, ಮಳೆ ಸುರಿಯುತ್ತದೆ ಎನ್ನುವ ನಂಬಿಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳ ಹಿಂದಿನಿಂದಲೂ ಇದೆ. ಈ ಬಾರಿಯೂ ಮಳೆ ಕೈಕೊಟ್ಟ ಕಾರಣ, ಜನ ಕಪ್ಪೆಗಳ ಮದುವೆಯ ಮೊರೆ ಹೋಗಿದ್ದಾರೆ.
ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಕಪ್ಪೆಗಳ ಮದುವೆ ಬಹಳ ಸಂಭ್ರಮದಿಂದ ನಡೆಯಿತು. ಎರಡು ಜೋಡು ಕಪ್ಪೆಗಳನ್ನ ಹಿಡಿದು ತಂದು, ಅವುಗಳಿಗೆ ಸರಳವಾಗಿ, ಶಾಸ್ತ್ರದಂತೆ ಮದುವೆ ಮಾಡಿಸಲಾಯಿತು. ಹೆಂಗಳೆಯರು ಎಣ್ಣೆ ಹಚ್ಚುವ ಪದಗಳು ಸೇರಿದಂತೆ ಶಾಸ್ತ್ರ ಬದ್ಧವಾಗಿ ಹಲವು ಹಾಡುಗಳನ್ನು ಹೇಳುವ ಮೂಲಕ ಕಪ್ಪೆಗಳ ಮದುವೆಗೆ ಕಳೆ ತಂದರು.
Read this also : ಶೀಘ್ರ ಸಚಿವ ಸಂಪುಟ ವಿಸ್ತರಣೆ ಸಿಎಂ ಡಿ ಕೆ ಶಿವಕುಮಾರ್ | Cabinet expansion soon cm dk shivakumar
Frog marrage for Rain 2026
ಕಪ್ಪೆಗಳ ಮದುವೆ ಮುಗಿಸಿ ಮನೆಗೆ ತೆರಳುವವರು, ಮಳೆಯಲ್ಲಿ ತೊಯ್ದು ಹೋಗುವಂತಾಗಲಿ ಎಂದು ಕಪ್ಪೆಗಳ ಮದುವೆಯಲ್ಲಿ ಭಾಗವಹಿಸಿದ್ದ ಜನ ಪ್ರಾರ್ಥಿಸಿದರು. ಗ್ರಾಮದ ಮಕ್ಕಳಂತೂ ಕಪ್ಪೆಗಳ ಮದುವೆ, ಹಾಡು, ಸಂಭ್ರಮ, ಕಂಡು ಕುಣಿದು ಕುಪ್ಪಳಿಸಿದರು.